Pages

Tuesday, September 26, 2023

 ಆರು ತಿಂಗಳು ಕಳೆದ ರಸ್ತೆ - ಈಗ ನೋಡಿ ಇದರ ಅವಸ್ಥೆ


ಸಂಜೆ ಸ್ವಲ್ಪ ವಾಕಿಂಗ್ ಹೋಗುವ ಅಭ್ಯಾಸ ಇದೆ. ಹಾಗೆ ಮುತ್ತೂರು ರಸ್ತೆಯಲ್ಲಿ ನಡೆದು ಕೊಂಡು ಹೋಗುತ್ತಿದ್ದೆ. ಅಲ್ಲಿ ಗಮನಿಸಿದ ಕೆಲವು ಅಂಶಗಳನ್ನು ತಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ.






ಕೊಡಿ ಬೆಟ್ಟು ಗ್ರಾಮ ಪಂಚಾಯಿತಿಗೆ ಸೇರಿದ ಊರು ಮುತ್ತೂರು. ಪೆರ್ಣಂಕಿಲ ರಸ್ತೆ ಯಿಂದ ಕೊಂಡಾಡಿ ರಸ್ತೆ ಯ ಮೂಲಕ ಉಡುಪಿ - ಕಾರ್ಕಳ ರಸ್ತೆಯನ್ನು ಜೋಡಿಸುವ ಪ್ರಮುಖ ಲಿಂಕ್ ರೋಡ್ ಈ ಮುತ್ತೂರು ರಸ್ತೆ . ಅನೇಕ ವರ್ಷಗಳಿಂದ ಈ ರಸ್ತೆ ದುರಸ್ತಿ ಯಾಗದೆ ರಸ್ತೆಯಲ್ಲಿ ಓಡಾಡುವ ವಾಹನ ಹಾಗೂ ಜನರಿಗೆ ತುಂಬಾ ತೊಂದರೆ ಯಾಗುತ್ತಿತ್ತು. ಮೊದಲು ಕಟ್ಟಿದ ಸೇತುವೆ ಕೇವಲ 2 ಚಕ್ರದ ವಾಹನ ಹಾಗೂ ಜನರು ಓಡಾಡಲು ಅನೂಕೂಲ ವಾಗಿತ್ತು . ಅದೂ ಎರಡೂ ಬದಿಗಳಲ್ಲಿ ಮುರಿದು ಜನ ಸಂಕಷ್ಟ ಪಡುತ್ತಿದ್ದರು. ಸೇತುವೆಗೆ ಬಳಸಿದ್ದ ಸಾವಿರಾರು ಹಣ ಪೋಲಾಗಿ ಹೋಗಿತ್ತು. ಈ ನಡುವೆ ಕೇಂದ್ರ ಸರಕಾರದ PMGSY ಅಡಿಯಲ್ಲಿ ಇತ್ತೀಚೆಗೆ ಕೋಟಿ ಯಾದಿಯಲ್ಲಿ ಖರ್ಚು ಮಾಡಿ ಒಂದು ಸೇತುವೆ ಹಾಗೂ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಯಿತು. ಜನ ತುಂಬಾ ನಿರೀಕ್ಷೆ ಯಲ್ಲಿದ್ದರು. ಆದರೆ ಕೇವಲ ಆರೇ ತಿಂಗಳ ಅವಧಿಯಲ್ಲಿ ರಸ್ತೆಗಳ ನಡುವೆ ಹೊಂಡ ಬೀಳಲು ಆರಭಿಸಿದೆ. ಇದು ಕಾಮಗಾರಿ ನಡೆಸಿದ ಅಧಿಕಾರಿಗಳ ಕಾರ್ಯ ವೈಖರಿಯನ್ನು ಸೂಚಿಸುತ್ತದೆ. ರಸ್ತೆ ಕೆಲಸಕ್ಕೆ ಮಣ್ಣನ್ನು ಕೇಳಿದಾಗ ನಾವೇ ಅದಕ್ಕೆ ಮಣ್ಣಿನ ವ್ಯವಸ್ಥೆಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಒದಗಿಸಿ ಕೊಟ್ಟಿದ್ದೇವೆ . (ಅಧಿಕಾರಿಗಳು ನಂತರ ಬಿಲ್ಲಿನಲ್ಲಿ ಡ್ರಾ ಮಾಡಿರಬಹುದು ಏನೊ ಗೊತ್ತಿಲ್ಲ.) ಜನರ ತೆರಿಗೆ ಹಣದಲ್ಲಿ ಈ ರೀತಿ ಕಳಪೆ ಕಾಮಗಾರಿ ನಡೆಸಿ ವಂಚಿಸುವುದು ಸರಿಯಲ್ಲ . ಇದರ ಬಗ್ಗೆ ಗ್ರಾಮದ ಜನ ಚಿಂತಿಸಬೇಕಿದೆ. 




No comments:

Post a Comment