Pages

Friday, October 4, 2024

hiria siri

      ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ





                                                   




                                                           2024 - 25 ನೇ ಸಾಲಿನ ಮಕ್ಕಳ ದಿನಾಚರಣೆ.                                       ದಿನಾಂಕ : 14 - 11 - 2024 ರಂದು ಕೆಪಿಎಸ್ ಹಿರಿಯಡ್ಕ ಇಲ್ಲಿ ಮಕ್ಕಳ ದಿನಾಚರಣೆ ಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು 8ನೇ ತರಗತಿಯ ಸುಮಿತ್ ರವರು ವಹಿಸಿದ್ದರು . ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯ ಕುರಿತು ಭಾಷಣ ಮಾಡಿದರು. ಗೀತೆಗಳನ್ನು ಹಾಡಿದರು. ಶಿಕ್ಷಕರ ಪರವಾಗಿ ಡಾ. ರವೀಂದ್ರ ಕುಮಾರ್ ವಿದ್ಯಾರ್ಥಿಗಳಿಗೆ ದಿನದ ಮಹತ್ವವನ್ನು ವಿವರಿಸಿ, ಹಿತನುಡಿ  ತಿಳಿಸಿದರು . ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಶಾಲಾ ಉಪಪ್ರಾಂಶುಪಾಲರಾದ  ಶ್ರೀ ಪ್ರಕಾಶ ಪ್ರಭು, ಶಾಲಾ ವಿದ್ಯಾರ್ಥಿ ನಾಯಕ , ಶಾಲಾ ವಿದ್ಯಾರ್ಥಿ  ನಾಯಕಿ ನಿವೇದಿತಾ ಉಪಸ್ಥಿತರಿದ್ದರು. 10ನೇ ತರಗತಿಯ ಭೂಮಿಕಾ ಸ್ವಾಗತಿಸಿದರು.  ಶಾರ್ವರಿ ವಂದಿಸಿದರು  .  10ನೇ ತರಗತಿಯ ಆಶಿತಾ ನಾಯಕ್ ಕಾರ್ಯಕ್ರಮ ನಿರೂಪಣೆ ಮಾಡಿದರು. 
 











Wednesday, October 2, 2024

ಬೆಂಗಳೂರು:

  ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕದ ಅಧ್ಯಾಪಕ ಶ್ರೀ ಡಾ. ರವೀಂದ್ರ ಕುಮಾರ್ ರವರಿಗೆ ರಾಜ್ಯ ಹಿಂದಿ ರತ್ನ ಪ್ರಧಾನ .                 


ಕರ್ನಾಟಕ ರಾಜ್ಯ ಹಿಂದಿ ಶಿಕ್ಷಕರ ಸಂಘ ಬೆಂಗಳೂರು ಜಿಲ್ಲಾ ಘಟಕ ಬೆಂಗಳೂರು ದಕ್ಷಿಣ , ಬೆಂಗಳೂರು ಗ್ರಾಮಾಂತರ , ಬೆಂಗಳೂರು ಉತ್ತರ ಸಹಯೋಗದೊಂದಿಗೆ ಶಿಕ್ಷಕರ ಸದನ ಬೆಂಗಳೂರು ಇಲ್ಲಿ ಒಂದು ದಿನದ ಸಮ್ಮೇಳನ ನಡೆಯಿತು. ಪ್ರತಿ ವರ್ಷ ಕೊಡಮಾಡುವ ರಾಜ್ಯ ಹಿಂದಿ ರತ್ನ ಪ್ರಶಸ್ತಿಯನ್ನ ಕೆಪಿಎಸ್ ಹಿರಿಯಡ್ಕ  ಇಲ್ಲಿನ ಹಿಂದಿ ಭಾಷಾ ಅಧ್ಯಾಪಕರಾದ ಶ್ರೀ ಡಾ. ರವೀಂದ್ರ ಕುಮಾರ್ ರವರಿಗೆ ರಾಜ್ಯ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕಮದಲ್ಲಿ ಕರ್ನಾಟಕ ರಾಜ್ಯ ವೈದ್ಯಕಿಯ ಮತ್ತು ಶಿಕ್ಷಣ ಸಚಿವರಾದ ಶ್ರೀ ದಿನೇಶ ಗುಂಡೂರಾವ್ ಶಾಸಕರಾದ ಪುಟ್ಟಣ್ಣ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜಾಧ್ಯಕ್ಷವಾದ ಸಿ.ಎಸ್ ಷಡಾಕ್ಷರಿ ರಾಜ್ಯ ಸಹ ಶಿಕ್ಷರ ಅಧ್ಯಕ್ಷರಾದ ಸಿದ್ದ ಬಸಪ್ಪ ಮುಂತಾದವರು ಉಪಸ್ಥಿತರಿದ್ದರು