Home
Thursday, June 26, 2025
ಚಿತ್ರ ಚಿತ್ತಾರ
ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ – 2025
ಡ್ರಾಯಿಂಗ್ ಗ್ರೇಡ್ ಕೈಪಿಡಿ ಬಿಡುಗಡೆ, ನಿವೃತ್ತ ಚಿತ್ರಕಲಾ ಶಿಕ್ಷಕರಿಗೆ ಗೌರವ ಸನ್ಮಾನ,
ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಉಡುಪಿ : ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ (ರಿ), ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಉಡುಪಿ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್, ಹಿರಿಯಡ್ಕ (ಉಡುಪಿ ವಲಯ) ಇವುಗಳ ಸಂಯುಕ್ತ ಆಶ್ರಯದಲ್ಲಿ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ – 2025 ಎಂಬ ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮವು ಈ ತಿಂಗಳ 28ನೇ ತಾರೀಖು ಶನಿವಾರದಂದು ಬೆಳಿಗ್ಗೆ 10 ಗಂಟೆಗೆ ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲಿನಲ್ಲಿ ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ಕಲಾ ಪ್ರಾತ್ಯಕ್ಷತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಗಲಿದ್ದು, ಎಣ್ಣೆಹೊಳೆ, ಕಾರ್ಕಳದ ಆರ್.ಎನ್. ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಶ್ರೀ ಗಣೇಶ್ ಅವರು ಕಲಾ ಪ್ರದರ್ಶನ ನೀಡಲಿದ್ದಾರೆ. ಅದಕ್ಕೂ ಮುನ್ನ, ವಿದ್ಯಾರ್ಥಿಗಳ ಕಲಾಕೃತಿಗಳ ಪ್ರದರ್ಶನವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್, ಹಿರಿಯಡ್ಕದ ವಿದ್ಯಾರ್ಥಿಗಳು ನಡೆಸಲಿದ್ದಾರೆ.
ಸಭಾ ಕಾರ್ಯಕ್ರಮವು 11 ಗಂಟೆಗೆ ಆರಂಭವಾಗಲಿದ್ದು, ಈ ಸಭಾ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ಪ್ರಸಾದ್, ಐ.ಎ.ಎಸ್. ರವರು ಉದ್ಘಾಟಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್, ಹಿರಿಯಡ್ಕದ ಪ್ರಾಂಶುಪಾಲರಾದ ಶ್ರೀ ಮಂಜುನಾಥ ಭಟ್ ವಹಿಸಲಿದ್ದಾರೆ.
ಕಾರ್ಯಕ್ರಮದ ಪ್ರಮುಖ ಅಂಗವಾಗಿ ಚಿತ್ರಕಲಾ ಶಿಕ್ಷಕರಿಗೆ ಮಾರ್ಗದರ್ಶಿಯಾಗಿ ಸಿದ್ಧಪಡಿಸಲಾದ ಡ್ರಾಯಿಂಗ್ ಗ್ರೇಡ್ ಪರೀಕ್ಷಾ ಕೈಪಿಡಿಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್), ಉಡುಪಿಯ ಪ್ರಾಂಶುಪಾಲರಾದ ಡಾ. ಅಶೋಕ ಕಾಮತ್ ಬಿಡುಗಡೆಗೊಳಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಹೃದಯಪೂರ್ವಕವಾಗಿ ಉಪಯೋಗಿಸಿಕೊಂಡು, ನಿವೃತ್ತ ಚಿತ್ರಕಲಾ ಶಿಕ್ಷಕರಿಗೆ ಗೌರವಸನ್ಮಾನವನ್ನೂ ನಡೆಸಲಾಗುತ್ತಿದೆ. ಈ ಗೌರವಸನ್ಮಾನವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಯಲ್ಲಮ್ಮ ಅವರು ನಿರ್ವಹಿಸಲಿದ್ದಾರೆ. ಚಿತ್ರಕಲಾ ಪ್ರದರ್ಶನವನ್ನು ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀ ಲೋಕೇಶ್ ಸಿ. ಅವರು ಉದ್ಘಾಟಿಸಲಿದ್ದಾರೆ.
ಶಿಕ್ಷಣ ಕ್ಷೇತ್ರದ ಹಲವು ಗಣ್ಯರ ಉಪಸ್ಥಿತಿಯೊಂದಿಗೆ ಈ ಕಾರ್ಯಕ್ರಮ ಬೆರಗುಗೊಳ್ಳಲಿದೆ. ಖ್ಯಾತ ಕೃಷಿ ಅರ್ಥಶಾಸ್ತ್ರಜ್ಞರಾದ ಡಾ. ಎನ್.ಎಸ್. ಶೆಟ್ಟಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹಾಗೂ ಡಯಟ್ ಉಪನ್ಯಾಸಕರಾದ ಶ್ರೀ ಯೋಗ ನರಸಿಂಹಸ್ವಾಮಿ ಕೆ.ಎಂ., ವಿಷಯ ಪರಿವೀಕ್ಷಕರಾದ ಶ್ರೀ ನಾಗರಾಜ್, ಎಸ್‌ಡಿಎಂಸಿ ಉಪಾಧ್ಯಕ್ಷರಾದ ಶ್ರೀ ಬಿ.ಎಲ್. ವಿಶ್ವಾಸ್ ಭಟ್, ಕರ್ನಾಟಕ ಪಬ್ಲಿಕ್ ಸ್ಕೂಲಿನ ಉಪಪ್ರಾಂಶುಪಾಲರಾದ ಶ್ರೀ ಪ್ರಕಾಶ್ ಪ್ರಭು ಮತ್ತು ಕುಂದಾಪುರ ತಾಲೂಕು ಚಿತ್ರಕಲಾ ಶಿಕ್ಷಕರ ಒಕ್ಕೂಟದ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಬಿ.ಪಿ. ಸಹ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಂಪೂರ್ಣ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಮೋಹನ್ ಕಡಬ , ಸಂಘದ ಪದಾಧಿಕಾರಿಗಳು, ಎಲ್ಲಾ ಸದಸ್ಯರು ಸ್ವಾಗತವನ್ನು ಕೋರಿದ್ದಾರೆ.
Thursday, June 5, 2025
ವಿಶ್ವ ಪರಿಸರ ದಿನಾಚರಣೆ
ವಿಶ್ವ ಪರಿಸರ ದಿನ ಜಿಲ್ಲಾ ಮಟ್ಟದ ಕಾರ್ಯಕ್ರಮ
ದಿನಾಂಕ 05 - 06 - 2025 ರಂದು ವಿಶ್ವ ಪರಿಸರ ದಿನಾಚರಣೆ 2025 ಜಿಲ್ಲಾ ಪಂಚಾಯತ್ ಉಡುಪಿ , ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಿತು..
ಇದಕ್ಕೆ ಮೊದಲು ಎಂ.ಜೆ.ಸಿ ಕಾಲೇಜಿನ ಆವರಣದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಪರಿಸರ ಜಾಗೃತಿ ಜಾಥಾ ನಡೆಯಿತು. ಉಡುಪಿಯ ವಿವಿಧ ಶಾಲೆಗಳಿಂದ ಬಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ್ ಶಂಕರ್ , ಉಡುಪಿ ಜಿಲ್ಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪನಿರ್ದೇಶಕರಾದ ಡಾ. ಅಶೋಕ್ ಕಾಮತ್ , ಜಿಲ್ಲಾ ಸತ್ರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು, ಸ್ಕೌಟ್ಸ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ನಿರ್ದೇಶಕರು ಶೀ ಜಯಕರ ಶೆಟ್ಟಿ ಇಂದ್ರಾಳಿ , ಎಂ. ಐ. ಟಿ ಸಂಖ್ಯೆಯ ಸಿವಿಲ್ ವಿಭಾಗದ ಮುಖ್ಯಸ್ಥರಾದ ಪ್ರೊ . ಬಾಲಕೃಷ್ಣ ಮದ್ದೋಡಿ ಉಪಸ್ಥಿತರಿದ್ದರು. ಪರಿಸರ ದಿನದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಿಕ್ಷಕರಾದ ಶ್ರೀ ಶಿವಪ್ರಸಾದ ಅಡಿಗ ರವರು ಕಾರ್ಯಕ್ರಮ ನಿರೂಪಿಸಿದರು.
SSLC TIME TABLE _ 2023
TOPPER IN PUC EXAM RESULT
KARNATAKA PUBLIC SCHOOL HIRIADKA 🌟Congratulations🌟 ಉಡುಪಿ: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇತ್ತೀಚೆಗೆ ಪ್ರಕಟಿಸಿ...
-
Home ಕರ್ನಾಟಕ ಸರಕಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ KPS HIRIADKA 2025 - 26 ನೇ ಸಾಲಿನ ಶಾಲಾ ಶೈಕ್ಷಣಿಕ ಕಾರ್ಯಕ್ರಮಗಳು S chool Programs for the year...
-
ವಿಶ್ವ ಪರಿಸರ ದಿನ ಜಿಲ್ಲಾ ಮಟ್ಟದ ಕಾರ್ಯಕ್ರಮ ದಿನಾಂಕ 05 - 06 - 2025 ರಂದು ವಿಶ್ವ ಪರಿಸರ ದಿನಾಚರಣೆ 2025 ಜಿಲ್ಲಾ ಪಂಚಾಯತ...
-
ದಾರಿ ದೀಪೋಕ್ತಿ ಜೀವನ ಏಳು ಬೀಳುಗಳ ಸಂಗಮ. ಸ್ನೇಹಿತರು , ಸಂಬಂಧಿಕರು, ಹಿರಿಯರು ನಮಗೆ ಮಾರ್ಗದರ್ಶಕರು. ಜೀವನ ಸುಗುಮ ದಾರಿಗೆ ಕೈಗನ್ನಡಿ ಈ.ದಾರಿ ದೀಪೋ...
Labels
- 10th hindi grammar (1)
- 10th notes (2)
- About me (1)
- Akshayamrutha (1)
- Doordarshan E_class (3)
- Doordarshan E_classes 8th (5)
- doordarshan E_classes 9th (6)
- doordarshna E_class 10th (13)
- General knowldge (1)
- Hindu festivals (1)
- jeeva sanjeevini (1)
- Karnataka public school hiriadka (1)
- Krushi (1)
- Mathematics (1)
- PUC NOTES (2)
- SA 1question papers (2)
- some important apps (1)
- ಕಥಾ ಮಾಲಿಕೆ (1)
- ಕರುಣಾಳು ಬಾ ಬೆಳಕೆ (1)









