ಪ್ರೀತಿಯ ವಿದ್ಯಾರ್ಥಿಗಳೇ,
ಪರೀಕ್ಷೆಯ ಬಗ್ಗೆ ಭಯ ಬೇಡ. ಈಗಾಗಲೇ ನೀವು ಪೂರ್ವಸಿದ್ದತಾ ಪರೀಕ್ಷೆಗಳನ್ನು ಬರೆದಿದ್ದಿರಾ .... ಅದಕ್ಕಿಂತ ಈ ಪರೀಕ್ಷೆಯು ಭಿನ್ನವಾಗಿಲ್ಲ
ಆತ್ಮಸೈರ್ಯ ಹಾಗೂ ಧೈರ್ಯದಿಂದ ಬರೆಯಿರಿ. ಯಶಸ್ಸು ನಿಮ್ಮದಾಗಲಿ ... ಮನೆಯಿಂದ ಹೊರಡುವಾಗ ತಂದೆ ತಾಯಿ ಗುರುಹಿರಿಯರಿಗೆ ನಮಸ್ಕರಿಸಿ ಬನ್ನಿ ..... ಪರೀಕ್ಷೆ ಬರೆಯಲು ಬೇಕಾದ ಪರಿಕರಗಳನ್ನು ಅಗತ್ಯವಾಗಿ ತನ್ನಿ ..... ಆರೋಗ್ಯದ ಬಗ್ಗೆ ಗಮನವಿರಲಿ ....... ನಿಗದಿ ಪಡಿಸಿದ ಸ್ಥಳದಲ್ಲಿ ಕುಳಿತು ಪರೀಕ್ಷೆ ಬರೆಯಿರಿ . ಶುಭವಾಗಲಿ......
*SSLC ಪರೀಕ್ಷೆ ಬರೆಯುತ್ತಿರುವ ಮುದ್ದು ಮಕ್ಕಳಿಗೆ ಶುಭವಾಗಲಿ*
1. ಇಂದು ರಾತ್ರಿ ಬೇಗ ಮಲಗಿ.
2. ಬೆಳಗ್ಗೆ 8:30 ಗಂಟೆಗೆ ಪರೀಕ್ಷಾ ಕೇಂದ್ರ ತಲುಪಿ. ಪರೀಕ್ಷಾ ಕೇಂದ್ರಕ್ಕೆ ಹೊರಡುವ ಮುನ್ನ ಅಲ್ಪ ಉಪಹಾರ ಮಾಡಿ.
3. ಪರೀಕ್ಷಾ ಕೇಂದ್ರಕ್ಕೆ ಹೊರಡುವ ಮುನ್ನ ನಿಮ್ಮ ಹಾಲ್ ಟಿಕೇಟ್, ಪ್ಯಾಡ್, ಜಾಮಿಟ್ರಿ ಬಾಕ್ಸ್, ಎರಡು ಉತ್ತಮವಾದ (OX) ಪೆನ್ನು ತೆಗೆದುಕೊಂಡು ಹೊರಡಿ.
4. ಪರೀಕ್ಷಾ ಕೇಂದ್ರಕ್ಕೆ ತಲುಪಿದ ನಂತರ ಭಯ ಆತಂಕ ಆಗಬೇಡಿ.
5. ಪರೀಕ್ಷೆ ಕೇಂದ್ರಕ್ಕೆ ಹೋದ ತಕ್ಷಣ ನಿಮ್ಮ ನೊಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿ ಇದೆ ಎಂದು ತಿಳಿದುಕೊಳ್ಳಿ.
6. ಕೊಠಡಿಗೆ ಹೋದ ನಂತರ ನಿಮ್ಮ ಅಕ್ಕ - ಪಕ್ಕ ಯಾರು ಇರುತ್ತಾರೆ ಅವರ ಜೊತೆ ಪರಿಚಯ ಮಾಡಿಕೊಳ್ಳಿ.
7. 09:45 ನಿಮಿಷಕ್ಕೆ ಲಾಂಗ್ ಬೇಲ್ ಆಗುತ್ತದೆ ಆಗ ನಿಮ್ಮ ನೊಂದಣಿ ಸಂಖ್ಯೆಯ ಮೇಲೆ ಹೋಗಿ ಕುಳಿತುಕೊಳ್ಳಿ.
8. ಬೆಳಗ್ಗೆ 9:45 ನಿಮಿಷಕ್ಕೆ ನಿಮ್ಮ ಕೊಠಡಿಗೆ ಮೇಲ್ವಿಚಾರಕರು ಬರುತ್ತಾರೆ ಅವರೊಂದಿಗೆ ಚನ್ನಾಗಿ ವ್ಯವಹಾರ ಇರಲಿ.
9. ನಂತರ ಅಂದರೆ 9:55 ನಿಮಿಷಕ್ಕೆ ಎರಡನೇ ಬೇಲ್ ಆಗುತ್ತೆ ಆಗ ನಿಮ್ಮಗೆ ಉತ್ತರ ಪತ್ರಿಕೆ ನೀಡುತ್ತಾರೆ. ಆಗ ನೀವು ನಿಮ್ಮ ಸರಿಯಾದ ನೋಂದಣಿ ಸಂಖ್ಯೆ ಉತ್ತರ ಪತ್ರಿಕೆಯಲ್ಲಿ ಬರೆಯಿರಿ.
10. ಸರಿಯಾಗಿ 10:00 ಗಂಟೆಗೆ ಮೂರನೇ ಬೇಲ್ ಆಗುತ್ತೆ. ಆಗ ನಿಮ್ಮಗೆ ಪ್ರಶ್ನೆ ಪತ್ರಿಕೆ ಕೂಡುತ್ತಾರೆ.
11. ಪ್ರಶ್ನೆ ಪತ್ರಿಕೆ ಕೊಟ್ಟ ನಂತರ ಒಮ್ಮೆ ಪ್ರಶ್ನೆ ಪತ್ರಿಕೆ ಗಮನವಿಟ್ಟು ಓದಿಕೊಳ್ಳಿ. ಯಾವುದೇ ಪ್ರಶ್ನೆಗೆ ಆತಂಕ ಮಾಡಿಕೊಳ್ಳಬೇಡಿ.
12. ಪ್ರಶ್ನೆ ಪತ್ರಿಕೆ ಓದಿದ ನಂತರ ಪ್ರಶ್ನೆ ಪತ್ರಿಕೆಯಲ್ಲಿ ನಿಮ್ಮಗೆ ಬರುವ ಪ್ರಶ್ನೆಗಳನ್ನು ಮೊದಲು ಬರೆಯಿರಿ.
13. 11:00 ಗಂಟೆಗೆ ನಾಲ್ಕನೆಯ ಬೇಲ್ ಆಗುತ್ತೆ ಅದರ ಅರ್ಥ ಪರೀಕ್ಷೆ ಪ್ರಾರಂಭವಾಗಿ ಒಂದು ಗಂಟೆ ಆಯಿತು ಅಂತ ಅರ್ಥ.
14. ವಸ್ತುನಿಷ್ಠ ಪ್ರಶ್ನೆಗಳನ್ನು ಬಹಳ ಗಮನವಿಟ್ಟು ಬರೆಯಿರಿ. ಯಾವುದೇ ಗೊಂದಲ ಮಾಡಿಕೊಂಡು ತಪ್ಪು ಉತ್ತರ ಬರಿಬೇಡಿ.
15. ಪ್ರಶ್ನೆ ಪತ್ರಿಕೆಯಲ್ಲಿನ 2-3-4-5 ಅಂಕದ ಪ್ರಶ್ನೆಗಳನ್ನು ಬರೆಯುವಾಗ ಪ್ರಮುಖ ಅಂಶಗಳನ್ನು ಅಂಡರ್ ಲಾಯಿನ್ ಮಾಡಿ ಬರೆಯುವುದು ಉತ್ತಮ.
16. 1:10 ನಿಮಿಷಕ್ಕೆ ಒಂದು ಸಿಂಗಲ್ ಬೇಲ್ ಆಗುತ್ತದೆ. ಅದರ ಅರ್ಥ ಪರೀಕ್ಷೆ ಮುಗಿಯಲು ಇನ್ನೂ 5 ನಿಮಿಷ ಉಳಿದಿದೆ ಎಂದು ಅರ್ಥ.
17. 5 ನಿಮಿಷ ಉಳಿದ ಸಮಯದಲ್ಲಿ ಇನ್ನೊಮ್ಮೆ ನಿಮ್ಮ ಉತ್ತರ ಪತ್ರಿಕೆಯಲ್ಲಿ ನೋಂದಣಿ ಸಂಖ್ಯೆ, ಮೇಲ್ವಿಚಾರಕರ ಸಹಿ ಕಡ್ಡಾಯವಾಗಿ ನೋಡಿಕೊಳ್ಳಿ.
18. 1:15 ನಿಮಿಷಕ್ಕೆ ಲಾಂಗ್ ಬೇಲ್ ಆದ ನಂತರ ನಿಮ್ಮ ಉತ್ತರ ಪತ್ರಿಕೆ ವಾಪಸ ಕೊಡಬೇಕು.
19. *ಪ್ರಮುಖ ಅಂಶ - 1* ಪರೀಕ್ಷೆ ಮುಗಿದ ನಂತರ ಆ ವಿಷಯದ ಬಗ್ಗೆ ಗೆಳೆಯ ಜೊತೆ ಚರ್ಚೆ ಮಾಡಬೇಡಿ. ಮುಂದಿನ ವಿಷಯದ ಬಗ್ಗೆ ಗಮನ ನೀಡುವುದು.
20. *ಪ್ರಮುಖ ಅಂಶ - 2* ಯಾವುದೇ ಕಾರಣಕ್ಕೂ ಆ ದಿನದ ಪ್ರಶ್ನೆ ಪತ್ರಿಕೆಯ ಅನ್ಸಾರ್ ಕೀ ನೋಡಬೇಡಿ. ಯಾವುದೇ PDF ಆಗಿರಬಹುದು ಅಥವಾ YouTube ಆಗಿರಬಹುದು ನೋಡಲು ಹೋಗಬೇಡಿ.
20. *ಪ್ರಮುಖ ಅಂಶ - 3* ಅನ್ಸಾರ್ ಕೀ ಬೇಕಾದರೆ ಏಪ್ರಿಲ್ ತಿಂಗಳ 05 ಅಥವಾ 06 ರಂದು ನಮ್ಮ ಇಲಾಖೆಯ ವೆಬ್ ಸೈಟ್ ನಲ್ಲಿ ಬಿಡುತ್ತಾರೆ, ಆಗ ನೀವು ಅನ್ಸಾರ್ ಕೀ ನೋಡಬಹುದು. ಅದಕ್ಕಿಂತ ಮುಂಚೆ ಯಾವುದೇ ಕಾರಣಕ್ಕೂ ಅನ್ಸಾರ್ ಕೀ ನೋಡಲು ಹೋಗಬೇಡಿ.
*Ravindra kumar KPS HIRIADKA*
🥰🥰🖊️🖊️📚
👍👍👍👍👍
🍫🍫🍫🍫🍫
💫 DUTY ORDERS AND OTHER USEFUL INFORMATION💫
1.Duties of Exam Chief and Root officer 👈 Click here
2. SSLC Exam suttole 2023 👈 Click here
3.Root Officer Deputation 👈 Click here
4.SSLC Exam Officer Deputation 👈 Click here
5. SSLC Sitting Quad Deputation 👈 Click here
6. Vigilance Report Formats 👈 Click here
7. Root Map Details 👈 Click here


No comments:
Post a Comment