ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ
2024 - 25 ನೇ ಸಾಲಿನ ಮಕ್ಕಳ ದಿನಾಚರಣೆ. ದಿನಾಂಕ : 14 - 11 - 2024 ರಂದು ಕೆಪಿಎಸ್ ಹಿರಿಯಡ್ಕ ಇಲ್ಲಿ ಮಕ್ಕಳ ದಿನಾಚರಣೆ ಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು 8ನೇ ತರಗತಿಯ ಸುಮಿತ್ ರವರು ವಹಿಸಿದ್ದರು . ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯ ಕುರಿತು ಭಾಷಣ ಮಾಡಿದರು. ಗೀತೆಗಳನ್ನು ಹಾಡಿದರು. ಶಿಕ್ಷಕರ ಪರವಾಗಿ ಡಾ. ರವೀಂದ್ರ ಕುಮಾರ್ ವಿದ್ಯಾರ್ಥಿಗಳಿಗೆ ದಿನದ ಮಹತ್ವವನ್ನು ವಿವರಿಸಿ, ಹಿತನುಡಿ ತಿಳಿಸಿದರು . ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಶಾಲಾ ಉಪಪ್ರಾಂಶುಪಾಲರಾದ ಶ್ರೀ ಪ್ರಕಾಶ ಪ್ರಭು, ಶಾಲಾ ವಿದ್ಯಾರ್ಥಿ ನಾಯಕ , ಶಾಲಾ ವಿದ್ಯಾರ್ಥಿ ನಾಯಕಿ ನಿವೇದಿತಾ ಉಪಸ್ಥಿತರಿದ್ದರು. 10ನೇ ತರಗತಿಯ ಭೂಮಿಕಾ ಸ್ವಾಗತಿಸಿದರು. ಶಾರ್ವರಿ ವಂದಿಸಿದರು . 10ನೇ ತರಗತಿಯ ಆಶಿತಾ ನಾಯಕ್ ಕಾರ್ಯಕ್ರಮ ನಿರೂಪಣೆ ಮಾಡಿದರು.
No comments:
Post a Comment