ಅಕ್ಷಯಾಮೃತ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿ ಹಿರಿಯಡ್ಕ ಗುರುವಂದನಾ ಕಾರ್ಯಕ್ರಮ. ಗುರುಗಳಾದ ಬೆಲ್ಪತ್ರೆ ವಿಶ್ವನಾಥ್ ನಾಯಕ್, ಪೆರಣoಕಿಲ ರಂಗಪ್ಪ ನಾಯಕ್, ಪಟ್ಲ ಶ್ರೀಕಾಂತ್ ಪ್ರಭು ಅವರನ್ನು ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಸೊಸೈಟಿಯ ಅಧ್ಯಕ್ಷರಾದ ಶ್ರೀಕಾಂತ್ ಕಾಮತ್ ಮತ್ತು ನಿರ್ದೇಶಕರಾದ ಪ್ರಕಾಶ್ ನಾಯಕ್, ಪಳ್ಳಿ ರಮಾನಂದ ಪ್ರಭು, ರವೀಂದ್ರ ನಾಯಕ್ ಉಪಸ್ಥಿತರಿದ್ದರು. 🙏🏻
ಅಕ್ಷಯಾಮೃತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ರಿ) ನಿಯಮಿತ ಹಿರಿಯಡ್ಕ
ದಿನಾಂಕ 09-09-2023 ರಂದು ಶನಿವಾರ ಅಕ್ಷಯಾ ಮೃತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ದ್ವಿತೀಯ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಶ್ರೀ ಶ್ರೀಕಾಂತ ಕಾಮತ್ ರವರ ಅಧ್ಕಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವು ಶ್ರೀಮತಿ ಸಂಧ್ಯಾ ಕಾಮತ್ ರವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸಂಸ್ಥೆಯ ನಿರ್ದೇಶಕರಾದ ಶ್ರೀ ರವೀಂದ್ರ ಕುಮಾರ್ ಪ್ರಭು ಸ್ವಾಗತಿಸಿದರು. ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಶಶಿಕಾಂತ ನಾಯಕ್ ರವರು 2022 - 23ನೇ ಸಾಲಿನ ಆಯವ್ಯಯ ಆಸ್ತಿ ಜವಾಬ್ದಾರಿಯ ವಿವರ ಮಂಡಿಸಿದರು. ಸಭೆಯಲ್ಲಿ ಆಯವ್ಯಯವು ಸರ್ವಾನುಮತದಿಂದ ಅಂಗೀಕಾರಗೊಂಡಿತು. ನಂತರ 2023 - 24ನೇ ಸಾಲಿನ ಬಜೆಟ್ ಮಂಡಿಸಿದರು. ಸಭೆಯಲ್ಲಿ ಬಜೆಟ್ ಅಂಗೀಕಾರಗೊಂಡಿತು.
ಸಭೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಶ್ರೀಯುತ ಬಾಲಕೃಷ್ಣ ನಾಯಕ್ ಹಾಗೂ ಕಲೆ ಸಾಹಿತ್ಯದ ಬಹುಮುಖ ಪ್ರತಿಭೆ ಶ್ರೀಮತಿ ಕುಸುಮ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರ ಶ್ರೀ ಬಾಲಕೃಷ್ಣ ನಾಯಕ್ ಮಾತನಾಡಿ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘಕ್ಕೆ ವಿಶೇಷ ಸೇವೆಯನ್ನು ಸಲ್ಲಿಸಿದ ರವೀಂದ್ರ ಪ್ರಭು ಕಡ್ತಲ, ಓಮೇಶ್ ನಾಯಕ್ ಶಿರ್ವ, ಸಂದೀಪ್ ನಾಯಕ್ ಪೆರಣಂಕಿಲ, ಸದಾನಂದ ನಾಯಕ್ ಕಳತ್ತೂರು ಇವರಿಗೆ ಗೌರವಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸೊಸೈಟಿಯ ಅಧ್ಯಕ್ಷರಾದ ಶ್ರೀಯುತ ಶ್ರೀಕಾಂತ್ ಕಾಮತ್ , ಉಪಾಧ್ಯಕ್ಷರಾದ ಶ್ರೀಯುತ ಗಿರೀಶ್ ಪ್ರಭು ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರಾದ ಶ್ರೀ ಜನಾರ್ಧನ ಆರ್ ನಾಯಕ್, ಶ್ರೀ ಸುದರ್ಶನ ಪ್ರಭು , ಶ್ರೀ ರವೀಂದ್ರ ಕುಮಾರ್ ಪ್ರಭು, ಶ್ರೀಮತಿ ಸಂಧ್ಯಾ ಕಾಮತ್, ಶ್ರೀ ರಮಾನಂದ ನಾಯಕ್, ಶ್ರೀಮತಿ ವಿಜಯಲಕ್ಷ್ಮಿ ಕಾರ್ಯನಿರ್ವಹಣಾಧಿಕಾರಿ ಶ್ರೀ ಶಶಿಕಾಂತ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀಕಾಂತ ಕಾಮತ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಯೋಜನೆಗಳ ಬಗ್ಗೆ ವಿವರಿಸಿದರು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ ಸಂಸ್ಥೆಗೆ ಸಹಕಾರ ನೀಡಿದ ಎಲ್ಲ ಸದಸ್ಯರನ್ನು ಅಭಿನಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ಕುಸುಮ ಕಾಮತ್ ಇವರಿಂದ ಮಿಮಿಕ್ರಿ ಮತ್ತು ಸಂಗೀತ ಕಾರ್ಯಕ್ರಮ ನಡೆಯಿತು.
ನಿರ್ದೇಶಕರಾದ ಶಾಂತರಾಮ್ ಸಾಲ್ವಂಕರ್ ವಂದಿಸಿದರು ಶ್ರೀ ಸುದರ್ಶನ ಎಸ್ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.


No comments:
Post a Comment